2 ಕೋಟಿ ರೂಪಾಯಿ ಜಾಹೀರಾತು ರಿಜೆಕ್ಟ್ ಮಾಡಿದ ಸಾಯಿ ಪಲ್ಲವಿ
- Ananthamurthy m Hegde
- Dec 26, 2024
- 1 min read

ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಾಯಿ ಪಲ್ಲವಿ ಅವರು 2 ಕೋಟಿ ರೂಪಾಯಿ ಮೌಲ್ಯದ ಒಂದು ಫೇರ್‌ನೆಸ್ ಕ್ರೀಮ್ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ಅವರ ಈ ನಿರ್ಧಾರ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಇದಲ್ಲದೆ, ಅವರು ಬಾಲಿವುಡ್‌ನಲ್ಲಿ ತಮ್ಮ ಅಭಿನಯ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ವೈದ್ಯಕೀಯ ಪದವೀಧರೆಯೂ ಆಗಿದ್ದಾರೆ . ಅವರ ಮುಂದಿನ ಚಿತ್ರ 'ರಾಮಾಯಣ' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ದಕ್ಷಿಣ ಭಾರತದ ನಟಿ ಸಾಯಿ ಪಲ್ಲವಿ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದವರು. ಅವರಿಗೆ ಹಲವು ಆಫರ್ಗಳು ಬಂದಿದ್ದವು. ಈ ಪೈಕಿ ಅವರು ಅಳೆದು ತೂಗಿ ಕೆಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. ಈ ಸುಂದರ ನಟಿ ವೈದ್ಯೆ ಕೂಡ ಹೌದು. ಅವರು ಎಂಬಿಬಿಎಸ್ ಕೂಡ ಓದಿದ್ದಾರೆ. ಸೌತ್ ನಂತರ ಬಾಲಿವುಡ್ನಲ್ಲಿ ಸದ್ದು ಮಾಡಲು ಸಾಯಿ ಪಲ್ಲವಿ ಸಜ್ಜಾಗಿದ್ದಾರೆ. ಈ ಮಧ್ಯೆ ಸಾಯಿ ಪಲ್ಲವಿ ಅವರ ಒಂದು ಅಪರೂಪದ ವಿಚಾರ ರಿವೀಲ್ ಆಗಿದೆ. ಅವರು ಬರೋಬ್ಬರಿ 2 ಕೋಟಿ ರೂಪಾಯಿ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದರು ಎಂಬುದು ವಿಶೇಷ.
ಸಾಯಿ ಪಲ್ಲವಿ 1992ರ ಮೇ 9 ರಂದು ತಮಿಳುನಾಡಿನ ಕೊಯಮತ್ತೂರಿನಲ್ಲಿ ಬಡಗ ಕುಟುಂಬದಲ್ಲಿ ಜನಿಸಿದರು. ಅವರ ತಂದೆಯ ಹೆಸರು ಸೆಂತಾಮರೈ ಕಾನನ್ ಮತ್ತು ತಾಯಿಯ ಹೆಸರು ರಾಧಾ, ನಟಿಗೆ ಪೂಜಾ ಕಾನನ್ ಹೆಸರಿನ ತಂಗಿ ಇದ್ದಾರೆ. ಅವರು ನಟಿಯಾಗಿಯೂ ಕೆಲಸ ಮಾಡಿದ್ದಾರೆ. ಅವರು ಉತ್ತಮ ನೃತ್ಯಗಾರ್ತಿಯೂ ಹೌದು. ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇದೀಗ ಸಾಯಿ ಪಲ್ಲವಿ ಬಾಲಿವುಡ್ ಪ್ರವೇಶಿಸಲು ಸಜ್ಜಾಗಿದ್ದಾರೆ.
ಸಾಯಿ ಪಲ್ಲವಿ ಅವರು ‘ಪ್ರೇಮಂ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಚಿತ್ರ ರಿಲೀಸ್ ಆಗಿ ದಶಕ ಕಳೆಯುತ್ತಾ ಬಂದಿದೆ. ಅವರಿಗೆ ಈ ಮೊದಲು ಸ್ಕಿನ್ಕೇರ್ ಆಫರ್ ಬಂದಿತ್ತು. ಆದರೆ, ಇದನ್ನು ಅವರು ರಿಜೆಕ್ಟ್ ಮಾಡಿದ್ದರು. ‘ಇದು ಭಾರತೀಯರ ಬಣ್ಣ. ನಾವು ವಿದೇಶರ ಬಳಿ ಹೋಗಿ ನೀವು ಏಕೆ ಬೆಳ್ಳಗೆ ಇದ್ದೀರಿ ಎಂದು ಕೇಳೋಕೆ ಆಗಲ್ಲ. ಇದರಿಂದ ಅವರಿಗೆ ಕ್ಯಾನ್ಸರ್ ಬರುತ್ತದೆ ಅನ್ನೋದು ಗೊತ್ತು. ನಮಗೆ ಆ ರೀತಿ ಆಗಬೇಕು ಎಂದು ಯೋಚಿಸೋಕೆ ಆಗಲ್ಲ. ಅದು ಅವರ ಬಣ್ಣ, ಇದು ಇವರ ಬಣ್ಣ. ಆಫ್ರಿಕಾದವರಿಗೆ ಅವರದ್ದೇ ಆದ ಬಣ್ಣ ಇದೆ’ ಎಂದಿದ್ದರು ಸಾಯಿ ಪಲ್ಲವಿ.
‘ಆ ಜಾಹೀರಾತುಗಳಿಂದ ಬಂದ ಹಣವನ್ನು ಏನು ಮಾಡೋದು. ನಾನು ಮನೆಗೆ ಹೋಗಿ ಮೂರು ಚಪಾತಿ ತಿನ್ನುತ್ತೇನೆ ಅಷ್ಟೆ. ನನಗೆ ದೊಡ್ಡ ಆಸೆಗಳಿಲ್ಲ’ ಎಂದು ಸಾಯಿ ಪಲ್ಲವಿ ಹೇಳಿದ್ದರು. ಈ ಮೂಲಕ ಅವರು ಎಲ್ಲ ವಿಚಾರಗಳಿಗೆ ಸ್ಪಷ್ಟನೆ ನೀಡಿದ್ದರು. ಸಾಯಿ ಪಲ್ಲವಿಗೆ ಫೇರ್‌ನೆಸ್ ಕ್ರೀಂ ಜಾಹೀರಾತಿಗೆ 2 ಕೋಟಿ ರೂ. ಸಿಕ್ಕಿತ್ತು. ಆದರೆ, ಇದನ್ನು ನಟಿ ತಿರಸ್ಕರಿಸಿದ್ದಾರೆ.ಸದ್ಯ ಸಾಯಿ ಪಲ್ಲವಿ ಅವರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
Comments