64 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಹಿಂದೂ ದೇವಾಲಯದ ಮರುನಿರ್ಮಾಣ!
- Oct 21, 2024
- 1 min read
64 ವರ್ಷಗಳ ನಂತರ ಮೊದಲ ಹಂತದ ಮರು ನಿರ್ಮಾಣ ಕಾಮಗಾರಿ ಇದಾಗಿರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಪಂಜಾಬ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಹಿಂದೂ ದೇವಾಲಯದ ಮರು ನಿರ್ಮಾಣಕ್ಕೆ 10 ಮಿಲಿಯನ್ ಪಾಕಿಸ್ತಾನಿ ರೂಪಾಯಿಗಳನ್ನು ನೀಡಲಾಗಿದೆ.
64 ವರ್ಷಗಳ ನಂತರ ಮೊದಲ ಹಂತದ ಮರು ನಿರ್ಮಾಣ ಕಾಮಗಾರಿ ಇದಾಗಿರಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇವಾಕ್ಯೂ ಟ್ರಸ್ಟ್ ಪ್ರಾಪರ್ಟಿ ಬೋರ್ಡ್ (ಇಟಿಪಿಬಿ), ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಆರಾಧನಾ ಸ್ಥಳಗಳನ್ನು ನೋಡಿಕೊಳ್ಳುವ ಫೆಡರಲ್ ಸಂಸ್ಥೆಯಾಗಿದ್ದು ಪಂಜಾಬ್‌ನ ರಾವಿ ನದಿಯ ಪಶ್ಚಿಮ ದಂಡೆಯ ನಗರವಾದ ನರೋವಾಲ್‌ನ ಜಫರ್ವಾಲ್ ಪಟ್ಟಣದಲ್ಲಿ ಬಾವೊಲಿ ಸಾಹಿಬ್ ದೇವಾಲಯದ ನಿರ್ಮಾಣವನ್ನು ಪ್ರಾರಂಭಿಸಿದೆ. 1960 ರಲ್ಲಿ ಇಲ್ಲಿ ಆರಾಧನೆಯನ್ನು ನಿಷ್ಕ್ರಿಯಗೊಳಿಸಲಾಗಿತ್ತು ಎಂದು ಡಾನ್ ನ್ಯೂಸ್ ವರದಿ ಮಾಡಿದೆ.
ಪ್ರಸ್ತುತ, ನರೋವಾಲ್ ಜಿಲ್ಲೆಯಲ್ಲಿ ಯಾವುದೇ ಹಿಂದೂ ದೇವಾಲಯವಿಲ್ಲ, ಹಿಂದೂ ಸಮುದಾಯವು ತಮ್ಮ ಧಾರ್ಮಿಕ ಆಚರಣೆಗಳನ್ನು ಮನೆಯಲ್ಲಿಯೇ ಮಾಡಲು ಅಥವಾ ಧಾರ್ಮಿಕ ಆಚರಣೆಗಳಿಗಾಗಿ ಸಿಯಾಲ್‌ಕೋಟ್ ಮತ್ತು ಲಾಹೋರ್‌ನಲ್ಲಿರುವ ದೇವಾಲಯಗಳಿಗೆ ಪ್ರಯಾಣಿಸಬೇಕಾಗುತ್ತದೆ.
ಪಾಕ್ ಧರ್ಮಸ್ಥಾನ ಸಮಿತಿಯ ಮಾಜಿ ಅಧ್ಯಕ್ಷ ರತನ್ ಲಾಲ್ ಆರ್ಯ ಮಾತನಾಡಿ, ಬಾವೊಲಿ ಸಾಹಿಬ್ ದೇವಾಲಯದ ಮೇಲೆ ETPB ಯ ನಿಯಂತ್ರಣ ದೇವಾಲಯದಲ್ಲಿನ ಆರಾಧನೆಯನ್ನು ನಿಷ್ಕ್ರಿಯಗೊಳಿಸಿತ್ತು. ನರೋವಾಲ್‌ನಲ್ಲಿ 1,453 ಕ್ಕಿಂತ ಹೆಚ್ಚು ಸಂಖ್ಯೆಯ ಹಿಂದೂ ಸಮುದಾಯಕ್ಕೆ ಪೂಜೆಗೆ ಮೀಸಲಾದ ಸ್ಥಳದ ಕೊರತೆಯಿದೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಸ್ಥಾಪನೆಯ ನಂತರ, ನರೋವಾಲ್ ಜಿಲ್ಲೆಯಲ್ಲಿ 45 ಹಿಂದೂ ದೇವಾಲಯಗಳು ಇದ್ದವು ಆದರೆ ಅವೆಲ್ಲವೂ ಕಾಲಾನಂತರದಲ್ಲಿ ಶಿಥಿಲಗೊಂಡಿವೆ.
ಕಳೆದ 20 ವರ್ಷಗಳಿಂದ, ಪಾಕ್ ಧರ್ಮಸ್ಥಾನ ಸಮಿತಿ ಬಾವೊಲಿ ಸಾಹಿಬ್ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಪ್ರತಿಪಾದಿಸುತ್ತಿದೆ ಎಂದು ಆರ್ಯ ಹೇಳಿದರು. ಹಿಂದೂ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ದೇವಾಲಯವನ್ನು ಪುನಃಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂ ಸಮುದಾಯದ ಬೇಡಿಕೆಗಳನ್ನು ಈಡೇರಿಸಲು ದೇವಾಲಯವನ್ನು ಪುನಃಸ್ಥಾಪಿಸಲು ಸರ್ಕಾರ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.
Comments