ಉದ್ಘಾಟನೆಗೊಂಡ ಸಂವಾದ ಪಂಚಕ ತಾಳಮದ್ದಳೆ ಕಮ್ಮಟ
- Ananthamurthy m Hegde
- Dec 22, 2024
- 1 min read
ಯಲ್ಲಾಪುರ: ಅಧುನಿಕತೆಯ ಮೋಹಕ್ಕೆ ಸಿಲುಕಿ ಸಂಸ್ಕಾರದಿಂದ ದೂರವಾಗಿತ್ತಿರುವ ಯುವಜನರನ್ನು, ಮಕ್ಕಳನ್ನು ಸಂಸ್ಕಾರದ ಚೌಕಟ್ಟಿನೊಳಗೆ ತರಲು ಯಕ್ಷಗಾನ, ತಾಳಮದ್ದಲೆಯಂತಹ ಕಲೆಗಳು ಅತ್ಯವಶ್ಯ ಎಂದು ಟಿಎಂಎಸ್ ಅಧ್ಯಕ್ಷ ನಾರಾಯಣ ಭಟ್ಟ ಅಗ್ಗಾಶಿಕುಂಬ್ರಿ ಹೇಳಿದರು.
ಅವರು ತಾಲೂಕಿನ ಹಸರಪಾಲ ಯಕ್ಷ ಸಂಸ್ಕೃತಿ ಪರಿವಾರದ ಆವಾರದಲ್ಲಿ ಶ್ರೀ ವೀರಮಾರುತಿ ತಾಳಮದ್ದಲೆ ಕೂಟ ಮಾಗೋಡ, ಪ್ರೇರಣಾ ಸಂಸ್ಥೆ ಗುಂದ ಇವರ ಸಹಯೋಗದಲ್ಲಿ ಆಯೋಜಿಸಿದ್ದ 'ಸಂವಾದ ಪಂಚಕ' ತಾಳಮದ್ದಲೆ ಕಮ್ಮಟವನ್ನು ಉದ್ಘಾಟಿಸಿ ಮಾತನಾಡಿದರು.
ಮೊಬೈಲ್, ಟಿವಿ, ಇತರ ಆಧುನಿಕತೆಯ ಮೋಹಕ್ಕೆ ಸಿಲುಕಿ ಬದುಕನ್ನೇ ನಾಶ ಮಾಡಿಕೊಂಡವರು ಅನೇಕರಿದ್ದಾರೆ. ಅದನ್ನು ತಡೆಯಲು ಯಕ್ಷ ಸಂಸ್ಕಾರ ಉತ್ತಮ ಔಷಧ ಎಂದರು.
ಹಿರಿಯ ಕಲಾವಿದರಾದ ತಿಮ್ಮಪ್ಪ ಹೆಗಡೆ ಶಿರಳಗಿ, ರಾಧಾಕೃಷ್ಣ ಕಲ್ಚಾರ್ ವಿಟ್ಲ, ಅರ್ಥಧಾರಿ ಡಾ.ಮಹೇಶ ಭಟ್ಟ ಇಡಗುಂದಿ, ಸಂಘಟಕರಾದ ಅನಂತ ಹೆಗಡೆ ದಂತಳಿಗೆ, ನರಸಿಂಹ ಭಟ್ಟ ಕುಂಕಿಮನೆ ಇತರರಿದ್ದರು. ಮಹೇಶ ಭಟ್ಟ ಸ್ವಾಗತಿಸಿದರು. ಪಂಚಮಿ ಹಸರಪಾಲ ನಿರ್ವಹಿಸಿದರು.
Comments