ಕಾಡು ಹಂದಿ ದಾಳಿ : ಮೂವರಿಗೆ ಗಾಯ
- Ananthamurthy m Hegde
- Jan 4
- 1 min read
ಯಲ್ಲಾಪುರ: ಕಾಡು ಹಂದಿ ದಾಳಿಯಿಂದ ಮೂವರು ಗಾಯಗೊಂಡ ಘಟನೆ ತಾಲೂಕಿನ ಕುಂದರಗಿ ಸಮೀಪದ ಹೆಮ್ಮಾಡಿಯಲ್ಲಿ ಗುರುವಾರ ನಡೆದಿದೆ.

ಗಂಗಾಧರ ಮಡಿವಾಳ, ಪಾಂಡುರಂಗ ಮಡಿವಾಳ ಹಾಗೂ ನಿತ್ಯಾನಂದ ಗೌಡ ಗಾಯಗೊಂಡವರು. ಗಂಗಾಧರ ಗೌಡ ಅವರ ಜಮೀನಿನಲ್ಲಿ ಭತ್ತದ ಒಕ್ಕಲು ಮಾಡಿದ್ದು, ಮೂವರೂ ಸೇರಿ ಕಣದಲ್ಲಿ ಹುಲ್ಲು ಕಟ್ಟುವ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿ ಮನೆಗೆ ಹೊರಡುವ ವೇಳೆ ಏಕಾಏಕಿ ಕಾಡು ಹಂದಿ ದಾಳಿ ಮಾಡಿದ್ದು, ಮೂವರನ್ನು ಗಾಯಗೊಳಿಸಿದೆ.
ವಿಷಯ ತಿಳಿದ ಅರಣ್ಯ ಇಲಾಖೆಯ ಆರ್.ಎಫ್.ಒ ಬಸವರಾಜ ಬೋಚಳ್ಳಿ, ಡಿ.ಆರ್.ಎಫ್.ಒ ಬೀರಪ್ಪ ಅವರು ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇವರಿಗೆ ಅರಣ್ಯ ಇಲಾಖೆಯಿಂದ ಪರಿಹಾರ ನೀಡುವ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದ್ದಾರೆ.
Comments