ಕುಮಟಾ ತಾಲೂಕಿನಲ್ಲಿ ಹಳಕಾರ ಶತಮಾನೋತ್ಸವ ಸಂಭ್ರಮ
- Ananthamurthy m Hegde
- Dec 22, 2024
- 1 min read
ಕಾರವಾರ ಆಡಳಿತ ಸಮಿತಿ ವಿಲೇಜ್ ಫಾರೆಸ್ಟ್ ಪಂಚಾಯತ್ ಹಾಗೂ ಶತಮಾನೋತ್ಸವ ಸಮಿತಿ ಹಾಗೂ ಗ್ರಾಮದ ವಿವಿಧ ಸಂಘ ಸಂಸ್ಥೆಗಳು ಹಾಗೂ ಊರಾನಾಗರಿಕರ ಸಹಯೋಗದಲ್ಲಿ ಹಳಕಾರ ಶತಮಾನೋತ್ಸವ ಸಂಭ್ರಮ ನಡೆಯಿತು .
ಹಳಕಾರ ಇದರ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮಕ್ಕೆ ಮುಖ್ಯ ಮಂಟಪ ಉದ್ಘಾಟಕನಾಗಿ ಭಾಗಿಯಾದ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳುವೈದ್ಯ ನಮ್ಮ ತಾಲೂಕಿನ ಹಾಳಕಾರ ಭಾಗದ ಅರಣ್ಯ ಅತ್ಯಂತ ಹಳೆಯ ಮಾನವ ನಿರ್ಮಿತ ಅರಣ್ಯದ ಭಾಗವಾಗಿರುವುದಕ್ಕೆ ನಾನು ಹೆಮ್ಮೆಪಡುವೆನು ಎಂದು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು . ನಮ್ಮ ಜಿಲ್ಲೆಯಲ್ಲಿಇತ್ತೀಚೆಗೆ ಗಮನ ಸೆಳೆಯುವಂತಹ ಒಂದು ಮಹತ್ವಪೂರ್ಣ ಸ್ಥಳವಿದೆ. ಅದು ಹಳೆಯ ಮಾನವ ನಿರ್ಮಿತ ಹಳಕಾರ ಅರಣ್ಯ. ಈ ಅರಣ್ಯವು ನಮ್ಮ ಕ್ಷೇತ್ರದ ಹೆಮ್ಮೆಯ ಭಾಗವಾಗಿದ್ದು, ನಮ್ಮ ಪ್ರಾಕೃತಿಕ ವೈಭವ ಮತ್ತು ಪರಿಸರ ಉಳಿವಿಗೆ ಮಹತ್ವಪೂರ್ಣ ಪಾತ್ರ ವಹಿಸುತ್ತದೆ. ಇದು ಸುಧಾರಿತ ಪರಿಸರ ವ್ಯವಸ್ಥೆ, ಪ್ರಕೃತಿಯ ವೈವಿಧ್ಯತೆಯ ಪಟವನ್ನು ಹೆಚ್ಚಿಸುವುದು ಹಾಗೂ ಮುಂದಿನ ಪೀಳಿಗೆಗಳಿಗೆ ಹಸಿರು ಹಕ್ಕಿದ ಮಾದರಿಯಾಗಿರುವುದರಿಂದ ನಾನು ಇದರ ಭಾಗವಾಗಿರುವುದಕ್ಕೆ ಹೆಮ್ಮೆ ಪಡುವೆನು ಎಂದು ಹೇಳಿದರು .
ಈ ಅರಣ್ಯವು ಮಾನವ ಚಟುವಟಿಕೆಗಳಿಂದ ರೂಪುಗೊಂಡಿದ್ದು, ಹಲವು ವರ್ಷಗಳ ಹಿಂದೆಯೇ ನೆಲೆಸಿದ ಹಳೆಯ ಮರಗಳು, ಹಸಿರು ಪರಿಸರ ಮತ್ತು ವಿಶೇಷವಾದ ಪರಿಸರ ಸ್ಥಿತಿಯನ್ನು ತಲುಪಿದೆ. ಇದು ಮಾತ್ರವಲ್ಲದೆ, ಹೆಚ್ಚಿನ ಪ್ರಾಣಿಗಳ ಆಶ್ರಯ ಸ್ಥಾನವಾಗಿ, ಪ್ರಾಕೃತಿಕ ವಾಸಸ್ಥಳಗಳನ್ನು ಉಳಿಸಿಕೊಳ್ಳಲು ಮಹತ್ವಪೂರ್ಣವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕುಮಟಾ ಶಾಸಕ ದಿನಕರ್ ಶೆಟ್ಟಿ, ಎಂ ವೈದ್ಯ, ಕೇಶವ್ ಸಂಬು ಭಟ್ , ಹಾಗೂ ಸಮಿತಿ ಅಧ್ಯಕ್ಷರಾದ ನಾಗರಾಜ್ ಭಟ್, ಹೊಲನ್ ಗದ್ದೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ ಎಂ ಹೆಗಡೆ, ಗಜಾನನ ಗುನಗ ,ಅನಿಲ್ ಮಡಿವಾಳ್ ,ಮಾದೇವಿ ಮುಕ್ರಿ , ಸಾವಿತ್ರಿ ಪಟಗಾರ, ಎಂ ಡಿ ಸುಭಾಸ್ ಚಂದ್ರನ್, ಎಂ ಜಿ ನಾಯ್ಕ್ , ಹಾಗೂ ಎಲ್ಲಾ ಊರನಾಗರಿಕರು ಉಪಸ್ಥಿತರಿದ್ದರು.
Comments