ಕಾಲೇಜು ಶಿಕ್ಷಕನ ಮೇಲೆ ಹಲ್ಲೆ ಪ್ರಕರಣ : ಸೂಕ್ತ ಕ್ರಮಕ್ಕೆ ಆಗ್ರಹ
- Ananthamurthy m Hegde
- Dec 27, 2024
- 1 min read
ಸಿದ್ದಾಪುರ : ಸಾಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರಾಜು ಅವರ ಮೇಲೆ ನಡೆದ ಹಲ್ಲೆಯನ್ನ ಬಿ.ಎಸ್.ಎನ್. ಡಿ.ಪಿ ಸಿದ್ದಾಪುರ ಘಟಕವು ಖಂಡಿಸಿ ತಪ್ಪಿತಸ್ತರಿಗೆ ಶಿಕ್ಷೆ ನೀಡುವಂತೆ ಒತ್ತಾಯಿಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಿದರು.
ಬಿ.ಎಸ್.ಎನ್.ಡಿ.ಪಿ ತಾಲೂಕು ಅಧ್ಯಕ್ಷ ವಿನಾಯಕ ನಾಯ್ಕ್ ದೊಡಗದ್ದೆ ಮಾತನಾಡಿ, ಕ್ಷುಲ್ಲಕ ಕಾರಣಕ್ಕೆ ಉಪನ್ಯಾಸಕರ ಮೇಲೆ ನಡೆದ ಹಲ್ಲೆ ಘಟನೆಯನ್ನ ಸಂಘಟನೆ ವತಿಯಿಂದ ಖಂಡಿಸುತ್ತೇವೆ. ಸಣ್ಣ ಪುಟ್ಟ ವಿಷಯಗಳಿಗೆ ಉಪನ್ಯಾಸಕರ ಹಲ್ಲೆ ಮಾಡಿದರೆ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ. ಕೂಡಲೇ ಹಲ್ಲೆ ನಡೆಸಿದವರನ್ನು ಬಂಧಿಸಿ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಲಕ್ಷಣ ನಾಯ್ಕ್, ಜಿ.ಟಿ ನಾಯ್ಕ್, ಅನಿಲ್ ಕೊಠಾರಿ, ತಿರುಮಲ ಉಪಸ್ಥಿತರಿದ್ದರು.
Comments