ಕುವೈತ್ ಲೇಬರ್ ಕ್ಯಾಂಪ್ ಗೆ ಭೇಟಿ ನೀಡಿದ ಮೋದಿ
- Ananthamurthy m Hegde
- Dec 23, 2024
- 1 min read

ಕುವೈತ್‌ನ ಗಲ್ಫ್ ಸ್ಪಿಕ್ ಲೇಬರ್ ಕ್ಯಾಂಪ್‌ಗೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಮೂಲದ ಕೆಲಸಗಾರರೊಂದಿಗೆ ಮಾತುಕತೆ ನಡೆಸಿದರು. ದೇಶದ ಅಭಿವೃದ್ಧಿಯಲ್ಲಿ ಅವರ ದುಡಿಮೆಯ ಕೊಡುಗೆಯ ಬಗ್ಗೆ ತಿಳಿಸಿದರು.'ಗ್ರಾಮಗಳಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ನಮ್ಮ ದೇಶದ ಕಾರ್ಮಿಕ ಸಹೋದರರು ಯೋಚಿಸಬೇಕು. ಅದಕ್ಕಾಗಿ 2047 ವಿಕಸಿತ ಭಾರತದ ಬಗ್ಗೆ ಮಾತನಾಡುತ್ತಿರುವೆ. ಈ ಆಶಯವೇ ನಮ್ಮ ದೇಶದ ಶಕ್ತಿ. ನಮ್ಮ ದೇಶದ ರೈತರು ಹಾಗೂ ಕಾರ್ಮಿಕರು ಹೇಗೆ ಶ್ರಮವಹಿಸಿ ದುಡಿಯುತ್ತಿದ್ದಾರೆ ಅನ್ನೋದರ ಬಗ್ಗೆ ನಾನು ದಿನವೂ ಯೋಚಿಸುತ್ತೇನೆ' ಎಂದು ಪ್ರಧಾನಿ ಮೋದಿ ಹೇಳಿದರು.''ನಿಮ್ಮೆಲ್ಲರ ಶ್ರಮವು ನನ್ನನ್ನು ಹೆಚ್ಚು ಸಮಯ ದುಡಿಯುವಂತೆ ಪ್ರೇರೇಪಿಸುತ್ತದೆ. ಶ್ರಮಿಕರ ಬೆವರಿನ ವಾಸನೆಯು ನನಗೆ ಮದ್ದು ಕೊಟ್ಟಂತೆ ಆಗುತ್ತದೆ. ಶ್ರಮಿಕರು 10 ತಾಸು ದುಡಿದರೆ, ನಾನು ಹನ್ನೊಂದು ತಾಸು ದುಡಿಯಬೇಕು ಅನಿಸುತ್ತದೆ. ಅವರು ಹನ್ನೊಂದು ತಾಸು ಶ್ರಮಿಸಿದರು ನಾನು 12 ತಾಸಾದರೂ ಶ್ರಮಿಸಲೇಬೇಕಾಗುತ್ತದೆ'' ಎಂದರು.ನೀವು ನಿಮ್ಮ ಕುಟುಂಬಕ್ಕಾಗಿ ಎಂಟು ಹತ್ತು ತಾಸು ದುಡಿಯುತ್ತೀರ. ನಾನು ನನ್ನ 140 ಕೋಟಿ ಜನರಿರುವ ಕುಟುಂಬಕ್ಕಾಗಿ ಸ್ವಲ್ಪ ಹೆಚ್ಚಿನ ಸಮಯ ದುಡಿಯುತ್ತೇನೆ ಎಂದು ತಿಳಿಸಿದರು. ಭಾರತದ ಕಾರ್ಮಿಕರು ಅವರ ಅನುಭವಗಳು, ಹಿನ್ನೆಲೆ, ಅವರ ಊರುಗಳಲ್ಲಿ ಆಗುತ್ತಿರುವ ಅಭಿವೃದ್ಧಿಯ ಬಗ್ಗೆ ಮಾತನಾಡಿದರು.
Comments