ಗಮನ ಸೆಳೆದ ಸಚಿವ ಮಂಕಾಳ್ ವೈದ್ಯ , ಸತೀಶ ಸೈಲ್ ಹಾಗೂ ಭೀಮಣ್ಣ ನಾಯ್ಕ ನೃತ್ಯ
- Ananthamurthy m Hegde
- Nov 22, 2024
- 1 min read
ಭಟ್ಕಳ: ವಿಶ್ವ ಮೀನುಗಾರಿಕೆ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಮನರಂಜನೆ ಕಾರ್ಯಕ್ರಮದಲ್ಲಿ ಕುಚುಕು ಕುಚುಕು ಹಾಡಿಗೆ ಸಚಿವ ಮಂಕಾಳ್ ವೈದ್ಯ , ಸತೀಶ ಸೈಲ್ ಹಾಗೂ ಭೀಮಣ್ಣ ನಾಯ್ಕ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.
ಮತ್ಸ್ಯಮೇಳ-೨೦೨೪ ಕಾರ್ಯಕ್ರಮವನ್ನು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ ಉದ್ಘಾಟಿಸಿದ ಬಳಿಕ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ ಜನ್ಯಾ, ಖ್ಯಾತ ನಿರೂಪಕಿ ಅನುಶ್ರೀ, ಗಾಯಕಿ ಶಮೀತಾ ಮಲ್ಯಾಡ್, ದಿವ್ಯ ರಾಮಚಂದ್ರ ಸೇರಿದಂತೆ ಇನ್ನು ಹಲವಾರು ಕಲಾವಿದರಿಂದ ನಡೆಯುತ್ತಿದ್ದ ಮನರಂಜನೆ ಕಾರ್ಯಕ್ರಮ ವೇಳೆ ವೇದಿಕೆ ಮೇಲೆ ತೆರಳಿದ ಸಚಿವ ಮಂಕಾಳ್ ವೈದ್ಯ , ಸತೀಶ ಸೈಲ್ ಹಾಗೂ ಭೀಮಣ್ಣ ನಾಯ್ಕ ಅರ್ಜುನ್ ಜನ್ಯಾ ತಂಡ ಗಾಯಕ ಹಾಡಿದ ಕುಚುಕು ಕುಚುಕು ಕುಚುಕು ನಾನು ಚಡ್ಡಿ ದೋಸ್ತಿ ಕಣೋ ಕುಚುಕು ಹಾಡಿಗೆ ಕೆಲ ಸಮಯ ಹೆಜ್ಜೆ ಹಾಕಿ ನೆರೆದಿದ್ದ ಸಾರ್ವಜನಿಕರ ಗಮನ ಸೆಳೆದರು. ಈ ವೇಳೆ ಇವರಿಗೆ ಸಚಿವ ಮಂಕಾಳ್ ವೈದ್ಯರ ಪತ್ನಿ ಪುಷ್ಪಲತಾ ಹಾಗೂ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ಸಾಥ್ ನೀಡಿದರು.
Comments