top of page

ಜ.8 ಕ್ಕೆ ಜಂಟಿ ಸಂಸದೀಯ ಸಮಿತಿಯ ಸಭೆ

  • Writer: Ananthamurthy m Hegde
    Ananthamurthy m Hegde
  • Dec 24, 2024
  • 1 min read

ನವದೆಹಲಿ: ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಉದ್ದೇಶದ ಚುನಾವಣಾ ಸುಧಾರಣೆಯ ಮಸೂದೆ ಕುರಿತು ಚರ್ಚಿಸಲು ಜನವರಿ 8 ರಂದು 39 ಸದಸ್ಯರ ಮೊದಲ ಜಂಟಿ ಸಂಸದೀಯ ಸಮಿತಿಯ ಸಭೆ ನಡೆಯಲಿದೆ.

ಬಿಜೆಪಿ ಸದಸ್ಯ ಪಿ ಪಿ ಚೌಧರಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಅಧಿಕಾರಿಗಳು ಮಸೂದೆ ಕುರಿತು ವಿವರ ನೀಡಲಿದ್ದಾರೆ.

ಸಂವಿಧಾನ (129 ನೇ ತಿದ್ದುಪಡಿ) ಮಸೂದೆ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ಕಳೆದ ವಾರ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಶುಕ್ರವಾರ ಸಂಸತ್ತಿನ ಜಂಟಿ ಸದನ ಸಮಿತಿಗೆ ಒಪ್ಪಿಸಲಾಗಿತ್ತು.

ಏಕಕಾಲದಲ್ಲಿ ಚುನಾವಣೆ ನಡೆಸುವ ಎರಡು ಕರಡು ಶಾಸನಗಳನ್ನು ಪರಿಶೀಲಿಸುವ ಭಾಗವಾಗಲು ಹೆಚ್ಚಿನ ರಾಜಕೀಯ ಪಕ್ಷಗಳು ಇಚ್ಛೆ ವ್ಯಕ್ತಪಡಿಸಿದ್ದರಿಂದ ಸಮಿತಿಯ ಸದಸ್ಯರ ಸಂಖ್ಯೆಯನ್ನು 31 ರಿಂದ 39 ಕ್ಕೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿತ್ತು.

ಸಮಿತಿಯಲ್ಲಿ ಮಾಜಿ ಕೇಂದ್ರ ಸಚಿವರಾದ ಅನುರಾಗ್ ಠಾಕೂರ್, ಪುರುಷೋತ್ತಮ್ ರೂಪಾಲಾ ಮತ್ತು ಮನೀಶ್ ತಿವಾರಿ ಹಾಗೂ ಹೊಸದಾಗಿ ಸಂಸದರಾಗಿರುವ ಪ್ರಿಯಾಂಕಾ ಗಾಂಧಿ ವಾದ್ರಾ, ಬಾನ್ಸುರಿ ಸ್ವರಾಜ್ ಮತ್ತು ಸಂಬಿತ್ ಪಾತ್ರ ಸೇರಿದಂತೆ ಹಲವು ಮಂದಿ ಸದಸ್ಯರಾಗಿದ್ದಾರೆ. ಲೋಕಸಭೆಯಿಂದ 27 ಮತ್ತು ರಾಜ್ಯಸಭೆಯಿಂದ 12 ಸದಸ್ಯರನ್ನು ಸಮಿತಿ ಹೊಂದಿದೆ.

Comments


Top Stories

bottom of page