top of page

ಟೆನಿಸ್‌ ದಿಗ್ಗಜ ರಾಫೆಲ್ ನಡಾಲ್ ನಿವೃತ್ತಿ ಘೋಷಣೆ

  • Oct 22, 2024
  • 1 min read

ರಾಫೆಲ್ ನಡಾಲ್ ಅವರು 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮತ್ತು ಒಲಿಂಪಿಕ್ ಸಿಂಗಲ್ಸ್ ನಲ್ಲಿ ಚಿನ್ನ ಗೆದ್ದಿದ್ದಾರೆ.












ಬೆಂಗಳೂರು: ನವೆಂಬರ್‌ನಲ್ಲಿ ಡೇವಿಸ್ ಕಪ್ ಫೈನಲ್‌ನ ನಂತರ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಹೊಂದುವುದಾಗಿ ಟೆನಿಸ್‌ ದಿಗ್ಗಜ ರಾಫೆಲ್ ನಡಾಲ್ ಅವರು ಗುರುವಾರ ಘೋಷಿಸಿದ್ದಾರೆ.

ರಾಫೆಲ್ ನಡಾಲ್ ಅವರು 22 ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳನ್ನು ಮತ್ತು ಒಲಿಂಪಿಕ್ ಸಿಂಗಲ್ಸ್ ನಲ್ಲಿ ಚಿನ್ನ ಗೆದ್ದಿದ್ದಾರೆ.

"ನಾನು ವೃತ್ತಿಪರ ಟೆನಿಸ್‌ನಿಂದ ನಿವೃತ್ತಿಯಾಗುತ್ತಿದ್ದೇನೆ. ವಾಸ್ತವವೆಂದರೆ ಇದು ವಿಶೇಷವಾಗಿ ಕಳೆದ ಎರಡು ವರ್ಷಗಳು ಅತ್ಯಂತ ಕಷ್ಟಕರ ವರ್ಷಗಳು" ಎಂದು ನಡಾಲ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಹೇಳಿದ್ದಾರೆ.

2008 ಮತ್ತು 2010ರಲ್ಲಿ ವಿಂಬಲ್ಡನ್ ಚಾಂಪಿಯನ್ ಆಗಿದ್ದ ನಡಾಲ್ ಕಳೆದೆರಡು ವರ್ಷಗಳಿಂದ ವಿವಿಧ ಗಾಯಗಳಿಂದ ಬಳಲುತ್ತಿದ್ದರು.

"ಇದು ನಿಸ್ಸಂಶಯವಾಗಿ ಕಠಿಣ ನಿರ್ಧಾರವಾಗಿದೆ. ಈ ನಿರ್ಧಾರ ತೆಗೆದುಕೊಳ್ಳಲು ನನಗೆ ಸ್ವಲ್ಪ ಸಮಯ ತೆಗೆದುಕೊಂಡಿತು. ಆದರೆ ಜೀವನದಲ್ಲಿ ಪ್ರತಿಯೊಂದಕ್ಕೂ ಆರಂಭ ಮತ್ತು ಅಂತ್ಯವಿದೆ" ಎಂದು ಹೇಳಿದ್ದಾರೆ.

ನಡಾಲ್ 14 ಫ್ರೆಂಚ್ ಓಪನ್ ಕಿರೀಟಗಳು, ನಾಲ್ಕು US ಓಪನ್ ಪ್ರಶಸ್ತಿಗಳು, ವಿಂಬಲ್ಡನ್ ಮತ್ತು ಆಸ್ಟ್ರೇಲಿಯನ್ ಓಪನ್‌ ಪ್ರಶಸ್ತಿ ಸೇರಿದಂತೆ ವೃತ್ತಿಜೀವನದಲ್ಲಿ 92 ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

ಅವರು ಕೊನೆಯ ಬಾರಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಪುರುಷರ ಡಬಲ್ಸ್ ಕ್ವಾರ್ಟರ್‌ಫೈನಲ್‌ಗೆ ತಲುಪಿದ್ದರು. ಅಲ್ಲಿ ಅವರು ಎರಡನೇ ಸುತ್ತಿನ ಸಿಂಗಲ್ಸ್‌ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ ನಡಾಲ್ ಸೋಲು ಅನುಭವಿಸಿದ್ದರು. ಕಳೆದ ತಿಂಗಳು US ಓಪನ್‌ನಿಂದ ಹಿಂದೆ ಸರಿದಿದ್ದರು.

Comments


Top Stories

bottom of page