ಡಿ.೧ರಂದು ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ
- Ananthamurthy m Hegde
- Nov 28, 2024
- 1 min read
ಸಿದ್ದಾಪುರ : ತಾಲೂಕ ಆರ್ಯ-ಈಡಿಗ-ನಾಮಧಾರಿ-ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘವು ಡಿ.೧ರಂದು ಪಟ್ಟಣದ ಶ್ರೀ ರಾಘವೇಂದ್ರ ಮಠದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಿದೆ ಎಂದು ಸಂಘದ ಅಧ್ಯಕ್ಷ ರವಿ ಕೆ.ನಾಯ್ಕತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿ ಡಿ.೧ರ ಬೆಳಿಗ್ಗೆ ೧೧ ಗಂಟೆಗೆ ಶ್ರೀ ರಾಘವೇಂದ್ರ ಮಠದಲ್ಲಿ ಸಭಾ ಕಾರ್ಯಕ್ರಮ ಜರುಗಲಿದ್ದು ಶಾಸಕ ಭೀಮಣ್ಣ ಟಿ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಆ.ಈ.ನಾ.ಬಿ.ನೌಕರರ ಸಂಘದ ಅಧ್ಯಕ್ಷ ರವಿ ಕೆ.ನಾಯ್ಕ ವಹಿಸುವರು. ಮುಖ್ಯ ಅತಿಥಿಗಳಾಗಿ ಗೃಹ ಸಚಿವರ ಆಪ್ತ ಕಾರ್ಯದರ್ಶಿ ಕೆ.ಚನ್ನಬಸಪ್ಪ ಕ.ಆ.ಸೇ, ನಗರಾಭಿವೃದ್ಧಿ ಇಲಾಖೆ ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ ಎಚ್.ಕೆ.ಕ ಅ ಸೇ , ಸಾಗರ ತಹಸೀಲದಾರ ಚಂದ್ರಶೇಖರ ಕೆ. ನಾಯ್ಕ, ಸಿದ್ದಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ, ಸಿದ್ದಾಪುರ ತಾಲೂಕ ನಾಮಧಾರಿ ಸಂಘದ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ಪಾಲ್ಗೊಳ್ಳಲಿದ್ದು ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ, ತಾಲೂಕ ಗ್ಯಾರೆಂಟಿ ಯೋಜನಾ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಲಯನ್ಸ ಕ್ಲಬ್ ಅಧ್ಯಕ್ಷ ಎ.ಜಿ.ನಾಯ್ಕ ಗೌರವ ಉಪಸ್ಥಿತಿ ನೀಡಲಿದ್ದು ತಾಲೂಕಿನ ನಾಮಧಾರಿ ಸಮಾಜದ ಗಣ್ಯರು, ಜನಪ್ರತಿನಿಧಿಗಳು ಮುಂತಾದವರು ಪಾಲ್ಗೊಳ್ಳುವರು ಎಂದರು.
Comentários