Search
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ವೀರಭದ್ರ ನಾಯ್ಕ್ ಆಯ್ಕೆ
- Ananthamurthy m Hegde
- Dec 24, 2024
- 1 min read

ಸಿದ್ದಾಪುರ : 2024-25,2029-30 ಅವಧಿಗೆ ಸಿದ್ದಾಪುರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಹುದ್ದೆಯ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆಯಿತು.
ಅಧ್ಯಕ್ಷರಾಗಿ ವೀರಭದ್ರ ನಾಯ್ಕ, ಉಪಾಧ್ಯಕ್ಷರಾಗಿ ಪಿ.ವಿ ಹೆಗಡೆ, ಖಜಾಂಚಿಯಾಗಿ ಚೌಡ ತಮ್ಮಣ್ಣ ಗೌಡ ಪ್ರಧಾನ ಕಾರ್ಯದರ್ಶಿಯಾಗಿ ಪರಮೇಶ್ವರ ನಾಯ್ಕ , ಜಿಲ್ಲಾ ಸದಸ್ಯರಾಗಿ ಗೋಪಾಲ ನಾಯ್ಕ ರವರುಗಳು ಅವಿರೋಧವಾಗಿ ಆಯ್ಕೆಗೊಂಡರು.
ತಾಲೂಕ ಕೃಷಿಕ ಸಮಾಜದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಹುದ್ದೆಗೆ ನಾಮಪತ್ರ ಸಲ್ಲಿಕೆ ಪಟ್ಟಣದ ಕೃಷಿ ಇಲಾಖೆ ಕಛೇರಿಯಲ್ಲಿ ನಡೆಯಿತು.
ಚುನಾವಣಾಧಿಕಾರಿ ಹಾಗೂ ಸಹಾಯಕ ಕೃಷಿ ನಿರ್ದೇಶಕಿ ಸುಮಾ ಮತ್ತು ಇಲಾಖೆ ಅಧಿಕಾರಿಗಳು ಚುನಾವಣೆ ಪ್ರಕ್ರಿಯೆ ನಡೆಸಿ ಪದಾಧಿಕಾರಿಗಳ ಘೋಷಣೆ ಮಾಡಿದರು.
Comments