ನ್ಯೂ ಇಯರ್ ಗೆ ಪಾರ್ಟಿ ಸಾಂಗ್ ರಿಲೀಸ್
- Ananthamurthy m Hegde
- Dec 27, 2024
- 2 min read

3 ಪೆಗ್ ಎಂಬ ರಾಪ್ಪ್ ಸಾಂಗ್ ನಿಂದ ಎಂಟ್ರಿ ಕೊಟ್ಟ ಚಂದನ್ ಶೆಟ್ಟಿ ಈಗ ಹೊಸ ವರ್ಷಕ್ಕೆ ಕಾಟನ್ ಕ್ಯಾಂಡಿ ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ . ಇವರ ಹಾಡುಗಳು ವಿಶೇಷಾಗಿಯೇ ಇರುತ್ತವೆ. 3 ಪೆಗ್ ಸಾಂಗ್ ಈಗಲೂ ಇಷ್ಟ ಆಗುತ್ತದೆ. ಟಕಿಲಾ, ಚಾಕೊಲೇಟ್ ಗರ್ಲ್, ಹೀಗೆ ಹಲವು ಹಾಡುಗಳನ್ನ ಕೊಟ್ಟಿದ್ದಾರೆ. ಲಕಾ ಲಕಾ ಲಂಬರ್ಗಿನಿ, ನೋಡು ಶಿವ ಆದ್ಮೇಲೆ ಚಂದನ್ ಶೆಟ್ಟಿ ಯಾವುದೇ ಹಾಡನ್ನ ಮಾಡಿರಲಿಲ್ಲ. ತಮ್ಮದೇ ಸಿನಿಮಾಗಳಲ್ಲಿಯೇ ಬ್ಯುಸಿ ಆಗಿದ್ದರು. ಆದರೆ, ಈ ವರ್ಷ ಪಾರ್ಟಿ ಮಾಡಲು ಒಂದು ಸಾಂಗ್ ಕೊಟ್ಟಿದ್ದಾರೆ. ಇದಕ್ಕೆ ಕಾಟನ್ ಕ್ಯಾಂಡಿ ಅನ್ನುವ ಹೆಸರು ಇಟ್ಟಿದ್ದಾರೆ. ದುಬೈನಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಒಳ್ಳೆ ಲೋಕೇಷನ್‌ಗಳಲ್ಲಿಯೇ ಇಡೀ ಹಾಡು ಶೂಟಿಂಗ್ ಮಾಡಿದ್ದಾರೆ. ಈ ಹಾಡಿನ ವಿಡಿಯೋ ಕೂಡ ಇದೀಗ ರಿಲೀಸ್ ಆಗಿದೆ. ಈ ಹಾಡಿನಲ್ಲೂ ಒಬ್ಬ ಹೊಸ ನಟಿಯನ್ನ ಚಂದನ್ ಶೆಟ್ಟಿ ಪರಿಚಯಿಸಿದ್ದಾರೆ.
ಕಾಟನ್ ಕ್ಯಾಂಡಿ ಅಲ್ಲಿ ಬ್ರೇಕ್ ಅಪ್ ಕಥೆ
ಕಾಟನ್ ಕ್ಯಾಂಡಿ ಹಾಡು ಸೂಪರ್ ಆಗಿದೆ. ತುಂಬಾನೆ ಮಜಾ ಕೊಡುತ್ತದೆ. ಚಂದನ್ ಶೆಟ್ಟಿ ಸ್ಟೈಲ್ ನಲ್ಲಿಯೇ ಈ ಹಾಡು ಇದೆ. ವಿಶೇಷವೆಂದರೆ ಈ ಒಂದು ವಿಡಿಯೋ ಆಲ್ಬಂನಲ್ಲಿ ನವ ನಟಿ ಅಭಿನಯಿಸಿದ್ದಾರೆ. ಚಂದನ್ ಶೆಟ್ಟಿ ವಿಡಿಯೋ ಆಲ್ಬಂ ಅಂತ ಬಂದಾಗ, ಅಲ್ಲಿ ನವ ನಟಿಯರ ಆಗಮನ ಇದ್ದೇ ಇರುತ್ತದೆ.
ಅದೇ ರೀತಿನೇ ಇದೀಗ ಈ ಒಂದು ಕಾಟನ್ ಕ್ಯಾಂಡಿ ಹಾಡಿನಲ್ಲಿ ಬೆಂಗಳೂರು ಮೂಲದ ನಟಿ ಸುಶ್ಮಿತಾ ಗೋಪಿನಾಥ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ವರ್ದಿ ಮತ್ತು ವಜ್ರ ಅನ್ನುವ ಎರಡು ಸಿನಿಮಾಗಳನ್ನ ಸುಶ್ಮಿತಾ ಗೋಪಿನಾಥ್ ಮಾಡಿದ್ದಾರೆ. ಆದರೆ, ಆಲ್ಬಂ ಸಾಂಗ್ ಅಂತ ಬಂದ್ರೆ ಇದೆ ಮೊದಲ ಹಾಡಾಗಿದೆ.
ನನ್ನದು ಬ್ರೇಕ್‌ಅಪ್ ನಿನ್ನದೂ ಬ್ರೇಕ್‌ಅಪ್
ಚಂದನ್ ಶೆಟ್ಟಿ ಅವರ ಈ ಒಂದು ಕಾಟನ್ ಕ್ಯಾಂಡಿ ಹಾಡು ವಿಶೇಷವಾಗಿಯೇ ಶುರು ಆಗುತ್ತದೆ. ಬಿಳಿ ಬಣ್ಣದ ಕಾರಿನಿಂದ ಇಳಿದ ಸುಶ್ಮಿತಾ ಗೋಪಿನಾಥ್, ಸಿಟ್ಟಾಗಿರುತ್ತಾರೆ. ನಮ್ದು ಬ್ರೇಕ್‌ಅಪ್ ಅಂತ ಕಾರು ಹೋದ್ಮೇಲೂ ಕೂಗುತ್ತಾರೆ. ಆಗಲೇ ಕಪ್ಪು ಬಣ್ಣದ ಒಂದು ಕಾರ್ ಬರುತ್ತದೆ.
ಈ ಒಂದು ಕಾರಿನಲ್ಲಿ ಚಂದನ್ ಶೆಟ್ಟಿ ಇರ್ತಾರೆ. ಸುಶ್ಮಿತಾ ನೋಡಿ ಕಾರ್ ನಿಲ್ಲಿಸುತ್ತಾರೆ. ಏನ್ ಆಯಿತು ಅಂತಲೇ ಕೇಳ್ತಾರೆ. ಆಗ ಸುಶ್ಮಿತಾ ಬ್ರೇಕ್ ಅಪ್ ಆಯಿತು ಅಂತಲೇ ಹೇಳ್ತಾರೆ. ಚಂದನ್ ಶೆಟ್ಟಿ ಮುಂದುವರೆದು, ನನ್ನದೂ ಅದೇ ಕಥೆ, ಸೇಮ್ ಹಿಯರ್ ಅಂತಲೇ ಕಾರ್ ಹತ್ತಿಸಿಕೊಳ್ಳುತ್ತಾರೆ.
ಕಾರ್ ಅಲ್ಲಿ ಕಾಟನ್ ಕ್ಯಾಂಡಿ ಹಾಡು
ಕಾಟನ್ ಕ್ಯಾಂಡಿ ಹಾಡನ್ನ ದುಬೈನಲ್ಲಿಯೇ ಚಿತ್ರೀಕರಿಸಿದ್ದಾರೆ. ಇಲ್ಲಿಯ ರಸ್ತೆ ಮತ್ತು ಮರಳಿನ ಮೇಲೆ ಈ ಹಾಡಿನ ಚಿತ್ರೀಕರಣ ಮಾಡಲಾಗಿದೆ. ಇಡೀ ಹಾಡಿನಲ್ಲಿ ಸುಶ್ಮಿತಾ ಗೋಪಿನಾಥ್ ಅವರನ್ನ ಚಂದನ್ ಶೆಟ್ಟಿ ಹೊಗಳಿದ್ದಾರೆ. ಪೂರ್ತಿ ಹಾಡು ಸುಶ್ಮಿತಾ ಮೇಲೇನೆ ಇದೆ. ಸುಶ್ಮಿತಾ ಪಾತ್ರದ ಆಸಕ್ತಿ, ಶ್ರೀಮಂತಿಕೆ, ಹೀಗೆ ಎಲ್ಲವೂ ಚಂದನ್ ಶೆಟ್ಟಿಯ ಕಾಟನ್ ಕ್ಯಾಂಡಿ ಹಾಡಿನಲ್ಲಿ ಬಂದು ಹೋಗುತ್ತವೆ.
ಕಾಟನ್ ಕ್ಯಾಂಡಿ ಹಾಡಿನಲ್ಲಿ ಚಂದನ್ ಶೆಟ್ಟಿ ಒಳ್ಳೆ ಕಾಸ್ಟೂಮ್ ಹಾಕಿದ್ದಾರೆ. ಸುಶ್ಮಿತಾ ಗೋಪಿನಾಥ್ ಕೂಡ ಗ್ಲಾಮರಸ್ ಡ್ರೆಸ್ ತೊಟ್ಟಿದ್ದಾರೆ. ಹಾಗೆ ಈ ಒಂದಷ್ಟು ಕಾಸ್ಟೂಮ್ ಡಿಸೈನಿಂಗ್ ಮತ್ತು ಸ್ಟೈಲಿಂಗ್ ಅಲ್ಲಿ ಮೂವರು ಕೆಲಸ ಮಾಡಿದ್ದಾರೆ. ಕಿಚ್ಚ ಸುದೀಪ್ ಅವರಿಗೆ ಕಾಸ್ಟೂಮ್ ಡಿಸೈನ್ ಮಾಡೋ ಭರತ್ ಸಾಗರ್ ಕೂಡ ಈ ಮೂವರಲ್ಲಿ ಒಬ್ಬರಾಗಿದ್ದಾರೆ.
ಹೊಸ ವರ್ಷಕ್ಕೆ ಕಾಟನ್ ಕ್ಯಾಂಡಿ ಹಾಡು ರಿಲೀಸ್
ಕಾಟನ್ ಕ್ಯಾಂಡಿ ಆಲ್ಬಂ ಸಾಂಗ್ ರಿಲೀಸ್ ಆಗಿದೆ. ನಾಲ್ಕು ನಿಮಿಷದ ಈ ಒಂದು ಹಾಡಿನ ಹಿಂದಿ ಅದ್ಭುತ ತಂಡೇ ಕೆಲಸ ಮಾಡಿದೆ. ಚಂದನ್ ಶೆಟ್ಟಿ ಈ ಒಂದು ಹಾಡನ್ನ ಬರೆದಿದ್ದಾರೆ. ಡೈರೆಕ್ಷನ್ ಮಾಡಿ ಹಾಡಿದ್ದಾರೆ. ಅಭಿನಯಿಸಿದ್ದಾರೆ. ಹೀಗೆ ಎಲ್ಲವನ್ನೂ ಈ ಒಂದು ಹಾಡಿಗಾಗಿಯೇ ಮಾಡಿದ್ದಾರೆ.
ಒಂದು ಹಾಡಿನ ಮ್ಯೂಸಿಕ್ ಕೂಡ ಚೆನ್ನಾಗಿದೆ. ಎಂದಿನ ಹಾಡಿನಂತೆ ಚಂದನ್ ಶೆಟ್ಟಿ ಇಲ್ಲೂ ಮ್ಯಾಜಿಕ್ ಕ್ರಿಯೇಟ್ ಮಾಡಿದ್ದಾರೆ.
Comments