top of page

ಭರ್ಜರಿ ಕಲೆಕ್ಷನ್ ಅತ್ತ ಮ್ಯಾಕ್ಸ್ ಸಿನಿಮಾ

  • Writer: Ananthamurthy m Hegde
    Ananthamurthy m Hegde
  • Dec 26, 2024
  • 1 min read

ಕರ್ನಾಟಕದಲ್ಲಿ ಮಾತ್ರ ರಿಲೀಸ್ ಆಗಿರೋ ಮ್ಯಾಕ್ಸ್ ಚಿತ್ರದ ಫಸ್ಟ್ ಡೇ ಭರ್ಜರಿ ಕಲೆಕ್ಷನ್ ಮಾಡಿದೆ . ಸಿನಿಮಾ ಪ್ರೇಮಿಗಳು ಈ ಚಿತ್ರವನ್ನ ಚೆನ್ನಾಗಿಯೇ ರಿಸೀವ್ ಮಾಡಿದ್ದಾರೆ. 300ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಚಿತ್ರ ರಿಲೀಸ್ ಆಗಿದೆ. ಬೆಳಗ್ಗೆ 6.30 ಕ್ಕೆ ಶೋ ಶುರು ಆಗಿದೆ. ಬೆಂಗಳೂರು, ಮೈಸೂರು, ಬೆಳಗಾವಿ, ತುಮಕೂರು, ಹೀಗೆ ರಾಜ್ಯದ ಪ್ರಮುಖ ನಗರಗಳಲ್ಲಿ ಈ ಚಿತ್ರದ ಆಕಿಪೆನ್ಸಿ ಕೂಡ ತುಂಬಾನೆ ಚೆನ್ನಾಗಿದೆ. ಬಹುತೇಕ ಶೇಕಡ 80 ಕ್ಕೂ ಹೆಚ್ಚು ಇದೆ. ಈ ಮೂಲಕ ಚಿತ್ರ ಭರ್ಜರಿಯಾಗಿಯೇ ಓಪನ್ ಆಗಿದೆ.

ಮ್ಯಾಕ್ಸ್ ಫಸ್ಟ್ ಡೇ ಕಲೆಕ್ಷನ್

ಮ್ಯಾಕ್ಸ್ ಫಸ್‌ ಡೇ ಕಲೆಕ್ಷನ್ ಚೆನ್ನಾಗಿದೆ. ಬುಧವಾರ ಚಿತ್ರ ರಿಲೀಸ್ ಆಗಿದೆ. ಆದರೂ ಅದ್ಭುತ ಅನಿಸೋ ಕಲೆಕ್ಷನ್ ಆಗಿದೆ. ಯುಐ ಚಿತ್ರಕ್ಕೆ ಹೋಲಿಸಿದರೆ, ಮ್ಯಾಕ್ಸ್ ಚಿತ್ರದ ಕಲೆಕ್ಷನ್ ಉತ್ತಮ ಅನಿಸುತ್ತದೆ. Sacnilk.com ಕೊಟ್ಟಿರೋ ಲೆಕ್ಕಾಚಾರದ ಪ್ರಕಾರ ಮ್ಯಾಕ್ಸ್ ನಿಜಕ್ಕೂ ಸಖತ್ ಮ್ಯಾಜಿಕ್ ಮಾಡಿದೆ. ಮ್ಯಾಕ್ಸ್ ಚಿತ್ರ 300ಕ್ಕೂ ಹೆಚ್ಚು ಥಿಯೇಟರ್‌ನಲ್ಲಿ ಪ್ರದರ್ಶನ ಕಂಡಿದೆ. ಬೆಳಗ್ಗೆ 6.30ಕ್ಕೇನೆ ಈ ಚಿತ್ರದ ಶೋ ಇತ್ತು. ಮೊದಲ ದಿನದ ಮೊದಲ ಶೋಗೇನೆ ಅದ್ಭುತ ರೆಸ್ಪಾನ್ಸ್ ಪಡೆದಿದೆ. ರಾಜ್ಯದೆಲ್ಲೆಡೆ ಅತ್ಯುತ್ತಮ ಅನಿಸೋ ಅಭಿಪ್ರಾಯವೇ ಬಂದಿವೆ. ಸಂಜೆ ಶೋ ಮುಗಿಯೋ ಹೊತ್ತಿಗೆ 6 ಕೋಟಿಯೆಷ್ಟು ಕಲೆಕ್ಷನ್ ಆಗಿದೆ. ಆದರೆ, ರಾತ್ರಿ 10 ಗಂಟೆ ಹೊತ್ತಿಗೆ ಈ ಚಿತ್ರದ ಒಟ್ಟು ಕಲೆಕ್ಷನ್ ಲೆಕ್ಕ ಪ್ರಾಮಿಸಿಂಗ್ ಆಗಿಯೇ ಇದೆ.

ಕರ್ನಾಟಕ- 8.50 ಕೋಟಿ

ಮ್ಯಾಕ್ಸ್ ಚಿತ್ರದ ಮೊದಲ ದಿನ ಕಲೆಕ್ಷನ್ 8.50 ಕೋಟಿ ಆಗಿದೆ. ಇದು ಕರ್ನಾಟಕದಲ್ಲಿ ಮಾತ್ರ ಅನ್ನೋದು ವಿಶೇಷವೇ ಆಗಿದೆ. ಈ ಚಿತ್ರದ ತಮಿಳು, ತೆಲುಗು ಸೇರಿ ಇತರ ಭಾಷೆಯ ಚಿತ್ರ ಬರೋ ಶುಕ್ರವಾರ ರಿಲೀಸ್ ಆಗುತ್ತದೆ. ಆಗ ಈ ಚಿತ್ರದ ಕಲೆಕ್ಷನ್ ಲೆಕ್ಕಾಚಾರ ಇನ್ನೂ ಬೇರೆ ಇರುತ್ತದೆ.

ಆದರೆ, ಕರ್ನಾಟಕದಲ್ಲಿ ಮಾತ್ರ ಮ್ಯಾಕ್ಸ್ ಚಿತ್ರದ ಮೊದಲ ದಿನ 8.50 ಕೋಟಿ ಆಗಿರೋದು ವಿಶೇಷ ಅನಿಸುತ್ತದೆ. ಇದೇ ರೀತಿನೇ ಮ್ಯಾಕ್ಸ್ ಚಿತ್ರದ ಆಕ್ಯುಪೆನ್ಸಿ ಕೂಡ ಚೆನ್ನಾಗಿಯೇ ಇದೆ. ಇದರ ಒಟ್ಟಾರೆ ಶೇಕಡಾವಾರು 82.18% ಇದೆ. ಎರಡನೇ ದಿನವೂ ಇನ್ನೂ ಜಾಸ್ತಿ ಆಗುವ ನಿರೀಕ್ಷೆ ಕೂಡ ಇದೆ.

ಮ್ಯಾಕ್ಸ್ ಚಿತ್ರದ ರಾಜ್ಯದೆಲ್ಲೆಡೆ ರಿಲೀಸ್ ಆಗಿದೆ. ಪ್ರಮುಖ ನಗರದಲ್ಲಿ ಇದು ಕಮಾಲ್ ಮಾಡಿದೆ. ಹಾಗಾಗಿಯೇ ಮೊದಲ ದಿನ ಈ ಚಿತ್ರದ ಕಲೆಕ್ಷನ್ ಚೆನ್ನಾಗಿಯೇ ಆಗಿದೆ. ರಜೆ ಇರೋದ್ರಿಂದ ಮುಂದಿನ ದಿನಗಳಲ್ಲಿ ಇದು ಇನ್ನೂ ಜಾಸ್ತಿ ಆಗುತ್ತದೆ ಅನ್ನೋ ನಿರೀಕ್ಷೆ ಕೂಡ ಇದೆ.

Comments


Top Stories

bottom of page