ಮೆಹುಲ್ ಚೋಕ್ಸಿ ಬೆಲ್ಜಿಯಂ ನಲ್ಲಿ ಬಂಧನ !
- Ananthamurthy m Hegde
- 1 day ago
- 1 min read
ನವದೆಹಲಿ: ಭಾರತದಿಂದ ಪರಾರಿಯಾಗಿದ್ದ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ಬೆಲ್ಜಿಯಂ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ) ಇಬ್ಬರು ಪ್ರಮುಖ ಆರೋಪಿಗಳಲ್ಲಿ ಮೆಹುಲ್ ಚೋಕ್ಸಿ ಒಬ್ಬರು.

ಕೇಂದ್ರ ತನಿಖಾ ದಳದ (ಸಿಬಿಐ) ಆದೇಶದ ಮೇರೆಗೆ ಶನಿವಾರ ಚೋಕ್ಸಿಯನ್ನು ಬಂಧಿಸಲಾಗಿದ್ದು, ಅವರು ಇನ್ನೂ ಜೈಲಿನಲ್ಲಿದ್ದಾರೆ. ವರದಿಯ ಪ್ರಕಾರ, ಚೋಕ್ಸಿಯನ್ನು ಬಂಧಿಸುವಾಗ, ಬೆಲ್ಜಿಯಂ ಪೊಲೀಸರು ಮುಂಬೈ ನ್ಯಾಯಾಲಯವು ಅವರ ವಿರುದ್ಧ ಹೊರಡಿಸಿದ ಎರಡು ಮುಕ್ತ ಬಂಧನ ವಾರಂಟ್‌ಗಳನ್ನು ಉಲ್ಲೇಖಿಸಿದ್ದಾರೆ. ಈ ವಾರಂಟ್‌ಗಳು ಮೇ 23, 2018 ಮತ್ತು ಜೂನ್ 15, 2021 ರ ದಿನಾಂಕದ್ದಾಗಿವೆ.
2018ರಲ್ಲಿ ದೇಶದಿಂದ ಪರಾರಿಯಾಗಿದ್ದ ಚೋಕ್ಸಿ, ಆರಂಭದಲ್ಲಿ ಆಂಟಿಗುವಾ ಮತ್ತು ಬಾರ್ಬುಡಾದಲ್ಲಿ ವಾಸಿಸುತ್ತಿದ್ದರು ಎಂದು ಹೇಳಾಗುತ್ತಿತ್ತು. ಆದರೆ, ಇತ್ತೀಚೆಗೆ ಅವರು ಬೆಲ್ಜಿಯಂನ ಆಂಟ್ವೆರ್ಪ್‌ನಲ್ಲಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿತ್ತು. ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಸಿಬಿಐ ಬೆಲ್ಜಿಯಂ ಸರ್ಕಾರಕ್ಕೆ ಮನವಿ ಮಾಡಿತ್ತು. ಅನಾರೋಗ್ಯ ಮತ್ತು ಇತರ ಕಾರಣಗಳನ್ನು ಉಲ್ಲೇಖಿಸಿ ಅವರು ಜಾಮೀನು ಕೋರುವ ನಿರೀಕ್ಷೆಯಿದೆ.
ಚೋಕ್ಸಿ ಸೋದರಳಿಯ ನೀರವ್ ಮೋದಿ ಪಿಎನ್‌ಬಿಗೆ 13,850 ಕೋಟಿ ರೂ. ವಂಚಿಸಿದ್ದು, ಅವರನ್ನು ಕರೆತರಲು ಸಿದ್ಧತೆ ನಡೆಯುತ್ತಿವೆ.
Comments