ರಾಜ್ಯದ ಜನಸಂಖ್ಯೆಯಲ್ಲಿ 2 ನೇ ದೊಡ್ಡ ಸಂಖ್ಯೆಯಲ್ಲಿರುವವರನ್ನು ಅಲ್ಪಸಂಖ್ಯಾತರೆಂದು ಹೇಗೆ ಪರಿಗಣಿಸಲು ಸಾಧ್ಯ: ಸಿ ಟಿ ರವಿ
- Ananthamurthy m Hegde
- 1 day ago
- 1 min read
ಚಿಕ್ಕಮಗಳೂರು: ರಾಜ್ಯದ ಜನಸಂಖ್ಯೆಯಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿರುವವರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ ಎಂದು ಮಾಜಿ ಸಚಿವ ಸಿ.ಟಿ ರವಿ ಪ್ರಶ್ನಿಸಿದರು.

ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, ಸಂವಿಧಾನ ಬದ್ಧವಾಗಿ ಜಾತಿ ಜನಗಣತಿ ಮಾಡುವ ಅಧಿಕಾರ ಕೇಂದ್ರಕ್ಕೆ ಇರುವುದು. ಇವರು ಸಾಮಾಜಿಕ, ಆರ್ಥಿಕ ಸಮೀಕ್ಷೆ ಎಂದು ಹೇಳಿದ್ದಾರೆ. ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ಈಗಲೇ ಸತ್ಯ-ಸುಳ್ಳು ಎಂದು ಪ್ರತಿಕ್ರಿಯಿಸುವುದು ಕಷ್ಟ. ಅನಧಿಕೃತವಾಗಿ ಸೋರಿಕೆ ಆಗಿರುವುದನ್ನು ಸತ್ಯ ಎಂದು ಭಾವಿಸಿದ್ರೆ ಚರ್ಚೆ ಹುಟ್ಟು ಹಾಕುತ್ತದೆ ಎಂದರು.
ಅಲ್ಪಸಂಖ್ಯಾತರು ಯಾರು? ರಾಜ್ಯದ ಜನಸಂಖ್ಯೆಯಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿರುವವರು ಅಲ್ಪಸಂಖ್ಯಾತರಾಗುತ್ತಾರಾ? ಮೀಸಲಾತಿ ಸಂಬಂಧ ಕೋರ್ಟ್‌ನಲ್ಲಿ ಮೊಕದ್ದಮೆ ಇದ್ದಾಗ ಕೇಂದ್ರ ಮೀಸಲಾತಿ ಪರ ಪ್ರಮಾಣಪತ್ರ ಸಲ್ಲಿಸಿತ್ತು. ಬಡ್ತಿ ಮೀಸಲಾತಿ ಪರ ಪ್ರಮಾಣಪತ್ರ ಸಲ್ಲಿಸಿತ್ತು. ಇದು ಮೀಸಲಾತಿ ಬಗ್ಗೆ ಬಿಜೆಪಿಗೆ ಇರುವ ಬದ್ಧತೆ. ಸಮಾಜ ಒಡೆಯುವ ದುರುದ್ದೇಶವನ್ನ ನಾವು ಬೆಂಬಲಿಸುವುದಿಲ್ಲ ಎಂದಿದ್ದಾರೆ.
ಮುಸ್ಲಿಮರಲ್ಲೂ 56 ಜಾತಿಗಳಿವೆ, ಮುಟ್ಟಿಸಿಕೊಳ್ಳದ ಜಾತಿ ಕೂಡ ಇದ್ದಾರೆ. ಪಸ್ಮಾಂಡ ಮುಸ್ಲಿಂ ಇದ್ದಾರೆ. ಯಾರು ಪ್ರವಾದಿ ವಂಶಸ್ಥರು ಅಂತ ಭಾವಿಸುತ್ತಾರೆ ಅವರು ಹೆಣ್ಣು ಕೊಡಲ್ಲ, ಹೆಣ್ಣು ತರಲ್ಲ. ಮುಸ್ಲಿಮರನ್ನ ಇಡಿಯಾಗಿ, ಹಿಂದೂಗಳನ್ನ ಒಡೆದು ಆಳುವ ನೀತಿಗೆ ನಮ್ಮ ಬೆಂಬಲವಿಲ್ಲ. ಸಾಮಾಜಿಕ ನ್ಯಾಯ ಬಿಜೆಪಿ ಬದ್ಧತೆಯಾಗಿದೆ. ಅದಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.
ವಕ್ಫ್ ಬೋರ್ಡ್ ಕಾಯ್ದೆ ವಿರುದ್ಧ ಕಾಂಗ್ರೆಸ್ ಅಪಪ್ರಚಾರ ಮಾಡ್ತಿದೆ. ಹಿಂದೆ ಸಿಎಎ ವಿರುದ್ಧವೂ ಕಾಂಗ್ರೆಸ್ ಇದೇ ಅಪಪ್ರಚಾರ ಮಾಡಿತ್ತು. ಕಾಂಗ್ರೆಸ್ ನಿಲುವು ರಾಷ್ಟ್ರಘಾತುಕ ನಿಲುವು, ಈಗ ವಕ್ಫ್ ಬಿಲ್‌ನಲ್ಲೂ ಅಪಪ್ರಚಾರ ಮಾಡುತ್ತಿದ್ದಾರೆ. ನ್ಯಾಯಬದ್ಧವಾದ ಜಮೀನನ್ನ ಯಾರೂ ಕಿತ್ತುಕೊಳ್ಳಲ್ಲ. ಅಕ್ರಮವಾಗಿ ಕಬಳಿಸಿದ ಜಮೀನನ್ನು ಬಿಡಲೇಬೇಕು. ರೈತರ ಜಮೀನು, ಸಾವಿರಾರು ವರ್ಷಗಳ ದೇವಸ್ಥಾನದ ಜಮೀನು ನಮ್ಮದು ಎಂದರೆ ಬಿಡಲೇಬೇಕು. ವಿಧಾನಸೌಧ, ಸುಪ್ರೀಂ ಕೋರ್ಟ್, ಹೈಕೋರ್ಟ್, ಪಾರ್ಲಿಮೆಂಟ್ ನಮ್ಮದು ಎಂದು ಹೇಳಲು ಅವಕಾಶ ಕೊಡಬೇಕಾ ಎಂದು ಪ್ರಶ್ನಿಸಿದರು.
Comments