ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕುರಿತು ಚಿಂತನ ಮಂಥನ ಸಭೆ
- Ananthamurthy m Hegde
- Nov 30, 2024
- 1 min read
ಕುಮಟಾ: ಉತ್ತರ ಕನ್ನಡ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲು ಚಿಂತನ ಮಂಥನ ಸಭೆ ಶುಕ್ರವಾರ ಸಂಜೆ ಕುಮಟಾದ ಬಗ್ಗೋಣದ ಲಯನ್ಸ್ ಸಭಾಭವನದಲ್ಲಿ ನಡೆದ ಸಭೆಯಲ್ಲಿಉತ್ತರ ಕನ್ನಡ ಜಿಲ್ಲೆಗೆ ಸುಪರ್ ಸ್ಪೆಷಾಲಿಟಿ ಆಸ್ಪತ್ರೆ ತರುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲು ಡಾ:ಜಿ. ಜಿ. ಹೆಗಡೆ, ಕೆನರಾ ಹೆಲ್ತ್ ಕೇರ್ ಆಸ್ಪತ್ರೆ ಕುಮಟಾ ರವರ ನೇತೃತ್ವದಲ್ಲಿ ನಡೆಯಿತು.
ರಸ್ತೆ ಅಪಘಾತ ಮತ್ತಿತರ ತುರ್ತು ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲೆಯ ಜನ ಪಕ್ಕದ ಮಣಿಪಾಲ, ಉಡುಪಿ, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಪಣಜಿ ಮುಂತಾದ ಕಡೆಗಳಲ್ಲಿಯ ಆಸ್ಪತ್ರೆಗೆ ಹೋಗುವ ಅನಿವಾರ್ಯತೆ ಇದೆ. ಇದರಿಂದಾಗಿ ದೂರದ ದಾರಿ ಕ್ರಮಿಸುವ ಅವಧಿಯಲ್ಲಿಯೇ ಮಾರ್ಗ ಮಧ್ಯೆ ಎಷ್ಟೋ ಜೀವಗಳನ್ನು ಕಳೆದುಕೊಂಡು ಕುಟುಂಬಸ್ದರು ರೋಧಿಸುವ ಸ್ಥಿತಿ ಜಿಲ್ಲೆಯಲ್ಲಿ ಸರ್ವೇಸಾಮಾನ್ಯವಾಗಿದೆ. ಎಂದು ಸಭೆಯಲ್ಲಿ ವ್ಯಕ್ತವಾಗಿದೆ.
ಸಭೆಯಲ್ಲಿ ಅನಂತಮೂರ್ತಿ ಹೆಗಡೆ ಸೇರಿಸಿ ಮುರಳಿದರ್ ಪ್ರಭು ಮುಂತಾದವರು ಇದ್ದರು.
Comentarios